ಮಂಗಳೂರು ಬಾರ್ಗಳಲ್ಲಿ ಪೊಲೀಸರ ಪರಿಶೀಲನೆ
ಮಂಗಳೂರು, ಜೂ.20: ಸಮಾಜ ವಿರೋಧಿ ಅಂಶಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಎಲ್ಲ ಬಾರ್ಗಳಲ್ಲಿ ಪೊಲೀಸರಿಂದ ಬುಧವಾರ ತಡರಾತ್ರಿ ಪರಿಶೀಲನೆ ನಡೆದಿದೆ.
ಆರೋಪಿಗಳು ಯಾವುದೇ ರೀತಿಯ ಡ್ರಗ್ಸ್ ಪದಾರ್ಥಗಳು, ಹಿಂಸಾತ್ಮಕ ಕೃತ್ಯಕ್ಕೆ ಬಳಸುವ ಮಾರಕಾಸ್ತ್ರಗಳು ಬಾರ್ನೊಳಗೆ ಸೇರದಂತೆ ಮತ್ತು ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಾರ್ಗಳಲ್ಲಿ ಪೊಲೀಸರು ಈ ಪರಿಶೀಲನೆ ನಡೆಸಿದ್ದಾರೆ.
ಕೆಲ ಕಿಡಿಗೇಡಿಗಳು ನಗರದಲ್ಲಿ ಯುವ ಸಮೂಹಕ್ಕೆ ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು ನೀಡುವ ಮೂಲಕ ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೂಡ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಾರ್ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
Next Story