ಕಾರ್ಕಳ: ಎಸ್ಸಿ/ಎಸ್ಟಿ ಸೌಲ್ಯಗಳಿಗೆ ಅರ್ಜಿ ಆಹ್ವಾನ
ಉಡುಪಿ, ಜೂ.25: ಕಾರ್ಕಳ ಪುರಸಭಾ ವ್ಯಾಪ್ತಿಯ 2019-20ನೇ ಸಾಲಿನ ಶೇ.24.10ರ ಎಸ್ಎಫ್ಸಿ ಮತ್ತು ಪುರಸಬಾ ಅನುದಾನದಲ್ಲಿ ಅನುಸೂಚಿತ (ಪರಿಶಿಷ್ಟ) ಜಾತಿ/ ಪಂಗಡದವರಿಗೆ ವ್ಯಕ್ತಿ ಸಂಬಂಧಿತ (ವೈಯಕ್ತಿಕ) ಫಲಾನುವಿಗಳಿಗಾಗಿ 10.88 ಲಕ್ಷ ಮತ್ತು ಪುರಸಭಾ ನಿಧಿಯಲ್ಲಿ 2.67 ಲಕ್ಷ ವನ್ನು ಕಾದಿರಿಸಿದ್ದು, ಈ ಕಾರ್ಯಕ್ರಮದಲ್ಲಿ ಸ್ವಯಂ-ಉದ್ಯೋಗ, ಮನೆ ಮೇಲ್ಛಾವಣಿ ದುರಸ್ಥಿ, ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಶೇ. 7.25ರ ಇತರೇ ಬಡಜನರ ಕಲ್ಯಾಣ ಕಾರ್ಯಕ್ರಮದಲ್ಲಿ ಮನೆ ಮೇಲ್ಛಾವಣಿ ದುರಸ್ಥಿ ಹಾಗೂ ಶೇ.5ರ ವಿಶೇಷ ಚೇತನರ ಶ್ರೇಯೋಭಿವೃದ್ಧಿ ನಿಧಿಯಲ್ಲಿ ವಿದ್ಯಾರ್ಥಿವೇತನ, ಸಾಧನ ಸಲಕರಣೆ ಖರೀದಿ, ಕೃತಕ ಅಂಗ ಜೋಡಣೆಗೆ ಸಹಾಯಧನ ನಿಗದಿಪಡಿಸಲಾಗಿದೆ.
ಇದಕ್ಕಾಗಿ ಅರ್ಹ ಫಲಾನುವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 1ರ ಒಳಗೆ ಪುರಸಭೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ಕಚೇರಿ ವೇಳೆಯಲ್ಲಿ ಸಂಬಂಧಿಸಿದ ವಿಬಾಗ ದಿಂದ ಪಡೆಯಬಹುದು ಕಾರ್ಕಳ ಪುರಸಬೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.