ಜೂ.28ರಂದು ಯುನಿವೆಫ್ನಿಂದ ಹಜ್ ತರಬೇತಿ ಶಿಬಿರ
ಮಂಗಳೂರು, ಜೂ.27: ಯುನಿವೆಫ್ ಕರ್ನಾಟಕದ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವನ್ನು ಜೂ.28ರಂದು ಅಪರಾಹ್ನ 3 ಗಂಟೆಗೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ನಿಮ್ರಾ ಮಸೀದಿಯ ಖತೀಬ್ ಹಾಗೂ ‘ಯುನಿವೆ್ ಕರ್ನಾಟಕ’ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು ಹಜ್ ಹಾಗೂ ಉಮ್ರಾದ ವಿಧಿವಿಧಾನಗಳನ್ನು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸುವರು.
ಹಜ್ ಕರ್ಮಗಳ ಛಾಯಾಚಿತ್ರ ಮತ್ತು ವೀಡಿಯೋವನ್ನೂ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಕಾರ್ಯಕ್ರಮದ ಬಳಿಕ ಹಜ್ ಕರ್ಮದಲ್ಲಿ ಪ್ರಸಕ್ತ ಇರುವ ಕೆಲವು ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ನೌಫಲ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story