ಓಪನ್ ಸ್ಟೇಟ್ ಸ್ಕೇಟಿಂಗ್ ಚಾಂಪಿಯನ್ ಶಿಪ್: ಮಂಗಳೂರು ತಂಡದಿಂದ ದಾಖಲೆ
ಮಂಗಳೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮೈಸೂರಿನಲ್ಲಿ ಜೂನ್ 21 ರಿಂದ 23ರವರೆಗೆ ಆಯೋಜಿಸಿದ ಓಪನ್ ಸ್ಟೇಟ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ಸ್ ಗಳು 28 ಚಿನ್ನ, 14 ಬೆಳ್ಳಿ ಮತ್ತು 8 ಕಂಚು ಸಹಿತ 50 ಪದಕಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ಪದಕ ವಿಜೇತರೆಲ್ಲರೂ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರರಾದ ಮೋಹನ್ ದಾಸ್.ಕೆ ಮತ್ತು ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story