ಆಯುಷ್ ಫೆಡರೇಶನ್ನಿಂದ ಯೋಗ ದಿನಾಚರಣೆ
ಮಂಗಳೂರು, ಜು.6: ಆಯುಷ್ ಫೆಡರೇಶನ್ ಆಫ್ ಇಂಡಿಯಾ ಮಂಗಳೂರು ವತಿಯಿಂದ ನಗರದ ಅಭಿಮಾನ್ ರೆಸಿಡೆನ್ಸಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯುಷ್ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಾಗಾರ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ನಿರಂತರ ವೈದ್ಯಕೀಯ ಕಾರ್ಯಕ್ರಮದಡಿ ಯೋಗ ತಜ್ಞ ಡಾ.ಕೆ.ಗಣೇಶ ಭಟ್ ಯೋಗ ಥೆರಪಿ ಕುರಿತು ಮಾತನಾಡಿದರು. ಅಶ್ವೀಜಾ ಉಡುಪ ಯೋಗ ಪ್ರದರ್ಶನ ನೀಡಿದರು. ಡಾ.ಪ್ರತಿಭಾ ರೈ, ಡಾ. ಸುಧೀರ್ ಪ್ರಭು, ಡಾ.ವಿಜಯಲಕ್ಷ್ಮಿ ಪ್ರಸನ್ನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಸುದೀಪ್ ದಂಪತಿ ನೃತ್ಯ ಪ್ರದರ್ಶಿಸಿದರು.
ಜಿಲ್ಲಾಧ್ಯಕ್ಷ ಡಾ. ನಾರಾಯಣ ಅಸ್ರ ಹಾಗೂ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀದೇವಿ ಭಟ್ ಉಪಸ್ಥಿತರಿದ್ದರು.
ಮಂಗಳೂರು ಎಎಫ್ಐ ಅಧ್ಯಕ್ಷ ಡಾ.ಕೃಷ್ಣ ಎಂ. ಗೋಖಲೆ ಸ್ವಾಗಸಿದರು. ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ವಂದಿಸಿದರು. ಡಾ.ಶಶಿಧರ ಕಜೆ ಕಾರ್ಯಕ್ರಮ ನಿರೂಪಿಸಿದರು.
Next Story