ಪಂಪ್ ವೆಲ್ ನಲ್ಲಿ ಸರಣಿ ಅಪಘಾತ: ಮಹಿಳೆ, ಮಗು ಸೇರಿ ಮೂವರಿಗೆ ಗಾಯ
ಮಂಗಳೂರು, ಜು.9: ನಗರದ ಪಂಪ್ ವೆಲ್ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮಹಿಳೆ, ಮಗು ಸೇರಿ ಮೂವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ನಂತೂರಿನಿಂದ ಪಂಪ್ ವೆಲ್ ಜಂಕ್ಷನ್ ಗೆ ಬರುವ ರಾ.ಹೆ.66ರಲ್ಲಿ ಘಟನೆ ನಡೆದಿದ್ದು, ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯೊಂದು ಕಾರಿಗೆ, ಕಾರು ಇನ್ನಿತರ 2 ಕಾರುಗಳಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಘಟನೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಟ್ರಾಫಿಕ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.