ದ.ಕ. ಜಿಲ್ಲಾ ಯುಸ್ಡ್ ವೆಹಿಕಲ್ ಡೀಲರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಶನ್ ಮಹಾಸಭೆ
ಮಂಗಳೂರು, ಜು.12: ದ.ಕ. ಜಿಲ್ಲಾ ಯುಸ್ಡ್ ವೆಹಿಕಲ್ ಡೀಲರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಶನ್ ಮಹಾಸಭೆಯು ನಗರದ ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯ ಮರಿಯ ಜಯಂತಿ ಹಾಲ್ನಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನ್ಯಾಯವಾದಿ ಹಾಗೂ ಸಂಘದ ಕಾನೂನು ಸಲಹೆಗಾರ ಎಸ್.ಪಿ. ಚೆಂಗಪ್ಪ ಉದ್ಘಾಟಿಸಿದರು. ಗೌರವ ಅಧ್ಯಕ್ಷ ಬಿ.ಅಶೋಕ್ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರತಾಪ್ ಕೆ.ಎಸ್. ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಚಂದ್ರಕಾಂತ್ ಎಸ್. ಲೆಕ್ಕಪತ್ರ ಮಂಡಿಸಿದರು.
2019-21ನೇ ಸಾಲಿಗೆ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್, ಕಾರ್ಯದರ್ಶಿಯಾಗಿ ಪ್ರತಾಪ್ ಕೆ.ಎಸ್., ಕೋಶಾಧಿಕಾರಿಯಾಗಿ ಚಂದ್ರಕಾಂತ್ ಎಸ್. ಅವರನ್ನು ಆಯ್ಕೆ ಮಾಡಲಾಯಿತು. ಮಾಧವ ಬಂಗೇರ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಲಕ್ಷ್ಮೀಪ್ರಸಾದ್ ವಂದಿಸಿದರು. ಮುಹಮ್ಮದ್ ರಝಾಕ್ ವಂದಿಸಿದರು.
Next Story