ಬಾಲಶಕ್ತಿ, ಬಾಲ ಕಲ್ಯಾಣ ಪುರಸ್ಕಾರಕ್ಕೆ ಪ್ರಸ್ತಾವನೆಗಳ ಆಹ್ವಾನ
ಉಡುಪಿ, ಜು.15: 2019-20ನೇ ಸಾಲಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡಲಾಗುವ ಬಾಲ ಶಕ್ತಿ ಪುರಸ್ಕಾರ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುವ ಬಾಲ ಕಲ್ಯಾಣ ಪುರಸ್ಕಾರ ಪ್ರಶಸ್ತಿಗಳನ್ನು ನೀಡಲು ಭಾರತ ಸರಕಾರದ ಮಾರ್ಗಸೂಚಿಗಳನ್ವಯ ಸೂಕ್ತ ಪ್ರಸ್ತಾವನೆಗಳನ್ನು ಅರ್ಹ ಮಕ್ಕಳ/ವ್ಯಕ್ತಿ/ಸಂಸ್ಥೆಗಳಿಂದ ಮುಕ್ತ ನಾಮಪತ್ರ ಗಳನ್ನು www.nca-wcd.nic.in ಜಾಲತಾಣದಲ್ಲಿ ಆ.31ರ ಒಳಗೆ ಸಲ್ಲಿಸಲು ಸೂಚಿಸಲಾಗಿದೆ.
ಅದರಂತೆ ಭಾರತ ಸರಕಾರದ ಅಧಿಕೃತ ಜಾಲತಾಣ www.nca-wcd.nic.in ನಲ್ಲಿ ಅರ್ಹ ನಾಮ ನಿರ್ದೇಶಿತರು ಪ್ರಸ್ತಾವನೆಗಳನ್ನು ಬಾರತ ಸರಕಾರಕ್ಕೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story