ಜು.24ರಿಂದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ
ಮಂಗಳೂರು, ಜು.16: ದ.ಕ. ಫುಟ್ಬಾಲ್ ಸಂಸ್ಥೆಯ ವತಿಯಿಂದ ಜು.24ರಿಂದ 23ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ ನಡೆಯಲಿದೆ.
ಪ್ರಾಥಮಿಕ ಶಾಲೆ ಬಾಲಕರು-ಬಾಲಕಿಯರು, ಹೈಸ್ಕೂಲ್ ಬಾಲಕರು-ಬಾಲಕಿಯರು, ಪಿಯು ಕಾಲೇಜು ಹುಡುಗರು, ಪಿಯು ಕಾಲೇಜು/ಪದವಿ ಕಾಲೇಜು ಮಹಿಳೆಯರು, ಕಾಲೇಜು ಪುರುಷರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತ ತಂಡಗಳು ನೆಹರೂ ಮೈದಾನದಲ್ಲಿರುವ ಫುಟ್ಬಾಲ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story