ಉಡುಪಿ ಕೆಥೊಲಿಕ ಸ್ತ್ರೀ ಸಂಘಟನೆ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ
ಉಡುಪಿ, ಜು.16: ಉಡುಪಿ ಧರ್ಮಪ್ರಾಂತದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಜಿಲ್ಲಾ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ 2019-2020ನೇ ಸಾಲಿನ ನೂತನ ಅಧ್ಯಕ್ಷರಾಗಿ ಕುಂದಾಪುರದ ಹಂಗ್ಳೂರಿನ ಪ್ರಮೀಳಾ ಡೇಸಾ ಆಯ್ಕೆಯಾಗಿದ್ದಾರೆ.
ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯನ್ನು ಸಂಘಟನೆಯ ನಿರ್ದೇಶಕ ಫಾ.ರೆಜಿನಾಲ್ಡ್ ಪಿಂಟೊ ನಡೆಸಿ ಕೊಟ್ಟರು. ನಿಕಟಪೂರ್ವ ಅಧ್ಯಕ್ಷರಾಗಿ ಜೆನೆಟ್ ಬರ್ಬೋಜ ಮುದರಂಗಡಿ, ಉಪಾಧ್ಯಕ್ಷ್ಷೆಯಾಗಿ ಫಿಲೊಮೆನಾ ಕಸ್ತೆಲೀನೊ ಅಜೆಕಾರು, ಕಾರ್ಯದರ್ಶಿಯಾಗಿ ಪ್ರೆಸಿಲ್ವಾ ಆಳ್ವಾ ಕಲ್ಮಾಡಿ, ಸಹಕಾರ್ಯದರ್ಶಿಯಾಗಿ ಹೆಲೆನ್ ಮೋನಿಸ್ ಪಾಂಬೂರ್, ಕೋಶಾಧಿಕಾರಿಯಾಗಿ ಫ್ಲೇವಿಯಾ ಡಿಸೋಜ ಶಿರ್ವ, ಮೊತಿಯಾಂ ಪತ್ರಿಕೆ ಸಂಪಾದಕರಾಗಿ ಅನೀಶಾ ಪಿಂಟೊ ಬ್ರಹ್ಮಾವರ್, ಸಹಸಂಪಾದಕರಾಗಿ ನೋರಿನ್ ಲೋಬೊ ಬಾರಕೂರು, ಕೇಂದ್ರೀಯ ಸಮಿತಿಯ ಸದಸ್ಯರುಗಳಾಗಿ ಜೂಡಿತ್ ಫೆರ್ನಾಂಡಿಸ್ ಉದ್ಯಾವರ, ಶಾಂತಿ ಸುವಾರಿಸ್ ಪಡುಕೋಣೆ, ಅನಿತಾ ಕ್ವಾಡ್ರಸ್ ಕಣಜಾರು ಆಯ್ಕೆಯಾದರು.
Next Story