ಮಂಗಳೂರು: ಹಜ್ ಯಾತ್ರೆಯ ತಂಡದಿಂದ ಪ್ರಯಾಣ
ಮಂಗಳೂರು: ಹಜ್ ಯಾತ್ರೆಯ ನಾಲ್ಕನೆ ತಂಡ ರಾತ್ರಿ 12:22ಕ್ಕೆ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ 75 ಪುರುಷರು ಮತ್ತು 82 ಮಹಿಳೆಯರಿದ್ದಾರೆ. ಹಜ್ ಯಾತ್ರೆಯ ಐದನೆ ತಂಡ ಮುಂಜಾವ 5:30ಕ್ಕೆ ಪ್ರಯಾಣಿಸಿದ್ದು, ಇದರಲ್ಲಿ 61 ಪುರುಷರು ಮತ್ತು 89 ಮಹಿಳೆಯರಿದ್ದಾರೆ.
ಗುರುವಾರ ಎರಡು ವಿಮಾನಗಳು ಮದೀನಾಕ್ಕೆ ಪ್ರಯಾಣ ಬೆಳೆಸಿದ್ದು, ತಲಾ 150 ರಂತೆ 300 ಪ್ರಯಾಣಿಕರು ತೆರಳಿದ್ದಾರೆ.
ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ಹಜ್ ಕ್ಯಾಂಪಿನಿಂದ ವಿಮಾನ ನಿಲ್ದಾಣಕ್ಕೆ ಬಸ್ ಮೂಲಕ ಪ್ರಯಾಣ ಬೆಳೆಸಿದ ಹಜ್ ಯಾತ್ರಿಕರು ಹೊರಗಿನ ಟರ್ಮಿನಲ್ ನಲ್ಲಿ ಪ್ರತಿಯೊಬ್ಬ ಹಜ್ ಯಾತ್ರಿಕರಿಗೆ 2,100 ಸೌದಿ ರಿಯಾಲ್ ವಿತರಿಸಲಾಯಿತು. ಯಾತ್ರಿಕರು ಈ ಹಿಂದೆ ಕಟ್ಟಿರುವ ಭಾರತೀಯ ಕರೆನ್ಸಿಯನ್ನು ಸೌದಿ ರಿಯಾಲ್ ಗೆ ಬದಲಾಯಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿತರಿಸಲಾಯಿತು.
Next Story