ಮೂಡುಬಿದಿರೆ: ವ್ಯಕ್ತಿ ನಾಪತ್ತೆ
ಮೂಡುಬಿದಿರೆ: ಕಡಂದಲೆ ಗ್ರಾಮದ ಬಿ.ಟಿ.ರೋಡ್ ನಿವಾಸಿ ನಾಗರಾಜ (70.ವರ್ಷ) ದಿನಾಂಕ 5.7.2019 ರಂದು ಬೆಳಿಗ್ಗೆ 8 ಗಂಟೆಗೆ ಕೊಡೆ ರಿಪೇರಿ ಕೆಲಸಕ್ಕೆಂದು ಮೂಡುಬಿದಿರೆ ಪೇಟೆಗೆ ಬಂದವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆಂದು ಅವರ ಮಗ ರವಿ ಎಂಬವರು ಮೂಡುಬಿದಿರೆ ಪೊಲೀಸು ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಕಾಣೆಯಾದ ವ್ಯಕ್ತಿಯ ಚಹರೆ ಇಂತಿದೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಕೂದಲು ಹೊಂದಿದ್ದಾರೆ.
ಕೆಂಪು, ನೀಲಿ ಹೂಗಳಿರುವ ಶರ್ಟ್, ಕೆಂಪು-ಹಳದಿ ಹೂಗಳಿರುವ ಲುಂಗಿ ಧರಿಸಿದ್ದು, ಕನ್ನಡ, ಮರಾಠಿ, ತುಳು ಮಾತನಾಡುವವರಾಗಿದ್ದಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಪೊಲೀಸು ಆಯುಕ್ತರು: 0824-2220801, 2220800 ಅಥವಾ ಮೂಡುಬಿದಿರೆ ಪೊಲೀಸು ಠಾಣೆ: 08258-236333 ಗೆ ಮಾಹಿತಿ ನೀಡುವಂತೆ ಪೊಲೀಸು ಪ್ರಕಟಣೆ ತಿಳಿಸಿದೆ.
Next Story