ಬೈಕ್ ಕಳವು: ಇಬ್ಬರು ಆರೋಪಿಗಳ ಬಂಧನ
ಮಲ್ಪೆ, ಜು.20: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಜು.20ರಂದು ಉಡುಪಿಯ ಕರಾವಳಿ ಬೈಪಾಸ್ ಬಳಿ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ವಳಚಿಲ್ ನಿವಾಸಿ ಮುಹಮ್ಮದ್ ಅಲ್ತಾಫ್(23) ಹಾಗೂ ವಳಚಿಲ್ ಜಂಕ್ಷನ್ ನಿವಾಸಿ ಮುಹಮ್ಮದ್ ಸಮೀರ್ (21) ಬಂಧಿತ ಆರೋಪಿಗಳು.
ಇವರಿಂದ ಜು.2ರಂದು ಕಿನ್ನಿಮುಲ್ಕಿಯಲ್ಲಿ ಮತ್ತು ಕೆಲವು ಸಮಯಗಳ ಹಿಂದೆ ಉಡುಪಿ ಪರಿಸರದಲ್ಲಿ ಕಳವುಗೈಯ್ಯಲಾದ ಎರಡು ಪಲ್ಸರ್ ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 80ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ, ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ವೃತ್ತ ನಿರೀಕ್ಷಕ ಮಂಜುನಾಥ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಎಸ್ಸೈ ಮಧು ಬಿ., ಎಎಸ್ಸೈಗಳಾದ ಸುಧಾಕರ ಬಿ., ರತ್ನಾಕರ ಕೆ., ಸಿಬ್ಬಂದಿ ಗಳಾದ ರತ್ನಾಕರ, ಪ್ರವೀಣ್, ಸಂತೋಷ್, ವಿಕ್ರಮ್ ಬೆರೆಟ್ಟೊ, ಚೇತನ್ ಪಿತ್ರೋಡಿ, ರವಿರಾಜ್, ಸದ್ದಾಂ ಹುಸೇನ್, ರಘು, ಶಿವಾನಂದ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.