ಕೆ.ಜಿ.ಎನ್ ಮಿತ್ತೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ, ‘ಇಕೋ ಕ್ಲಬ್’ ಉದ್ಘಾಟನೆ
ಬಂಟ್ವಾಳ, ಅ.2: ಕೆ.ಜಿ.ಎನ್ ಪದವಿ ಪೂರ್ವ ಕಾಲೇಜು ಮಿತ್ತೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.
ಈ ಸಂದರ್ಭ ಕಾಲೇಜಿನ ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸಹಯೋಗದಲ್ಲಿ ‘ಇಕೋ ಕ್ಲಬ್’ನ್ನು ಆರಂಭಿಸುವ ಮೂಲಕ ‘ಇಕೋ ಗಾರ್ಡನ್’ ಗೆ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.
ವಿಜ್ಞಾನ ವಿಭಾಗದ ಮುಖ್ಯಸ್ಥ ಇಸ್ತಿಕಾರ್ ಮುಡಿಪು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲ ರಿಝ್ವಾನ್ ಬೆಳ್ಮ ಶುಭ ಹಾರೈಸಿದರು. ಈ ಸಂದರ್ಭ ಉಪನ್ಯಾಸಕರಾದ ಶಾಕಿರ್, ಯತೀಶ್ ಸೇರಿ ಅನೇಕರು ಉಪಸ್ಥಿತರಿದ್ದರು.
Next Story