ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದನೆ: ಆರೋಪಿ ಸೆರೆ
ಬಂಟ್ವಾಳ : ಕುಳ ಗ್ರಾಮದ ಮಹಿಳೆಯೋರ್ವರಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಮೇರೆಗೆ ಯುವಕನೋರ್ವನನ್ನು ವಿಟ್ಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕುಳ ಗ್ರಾಮದ ಉರಿಮಜುಲು ನಿವಾಸಿ ಪುನೀತ್ ಪ್ರಸಾದ್ (20) ಬಂಧಿತ ಆರೋಪಿ.
ಮಹಿಳೆಯ ಪತಿ ಮೃತಪಟ್ಟಿದ್ದು, ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಾರೆ. ಈ ಸಂಬಂಧ ಆರೋಪಿಯು ರಾತ್ರಿ ಮನೆಗೆ ಬಂದು ವಿನಾಃ ಕಾರಣ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story