ನೀಲೇಶ್ವರದಲ್ಲಿ 150ಕ್ಕೂ ಅಧಿಕ ಮನೆಗಳು ಜಲಾವೃತ
ಕಾಸರಗೋಡು, ಆ.10: ಜಿಲ್ಲೆಯಲ್ಲಿ ಮಳೆ ಆರ್ಭಟ ತೀವ್ರಗೊಂಡಿದ್ದು, ಇಂದು ಮುಂಜಾನೆಯಿಂದ ಎಡೆಬಿಡದೆ ಮತ್ತೆ ಭಾರೀ ಮಳೆಯಾಗುತ್ತಿದೆ.
ಈ ನಡುವೆ ನೀಲೇಶ್ವರದಲ್ಲಿ 150ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ಜಿಲಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ಜನತೆ ತತ್ತರಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ಇಂದೂ ರಜೆ ಘೋಷಿಸಲಾಗಿದೆ.
ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಪ್ಪಳ ತೀರದಲ್ಲಿ ಕಡಲ್ಕೊರೆತ ಹಲವಾರು ಕುಟುಂಬಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.