ಗಾಂಜಾ ಸೇವನೆ: ಓರ್ವನ ಬಂಧನ
ಉಡುಪಿ, ಆ.14: ಗಾಂಜಾ, ಅಮಲು ಪದಾರ್ಥ ಸೇವನೆಗೆ ಸಂಬಂಧಿಸಿ ದಂತೆ ಓರ್ವನನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
76 ಬಡಗಬೆಟ್ಟು ಗ್ರಾಮದ ಶಾಂತಿನಗರ ರಿಕ್ಷಾ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಶೇಖ್ ಅಮೀರ್ ಸುಹೈಲ್ (20) ಬಂಧಿತ ಆರೋಪಿಯಾಗಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತ ಪಡಿಸಿಕೊಳ್ಳಲಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story