ಉಡುಪಿ: ಮಹಿಳೆ ನಾಪತ್ತೆ
ಉಡುಪಿ, ಆ.17: ಮಲ್ಲಾರು ಗ್ರಾಮದ ಕೊಂಬಗುಡ್ಡೆ ನಿವಾಸಿ ನಸೀಮಾ ಬಾನು (33) ಎಂಬುವವರು ಆ.9ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ಮನೆಗೆ ಮರಳದೇ ಕಾಣೆಯಾಗಿದ್ದಾರೆ.
165 ಸೆ.ಮಿ. ಎತ್ತರವಿದ್ದು, ಬಿಳಿ ಮೈಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಉರ್ದು ಬಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820-2551033, ಮೊಬೈಲ್:9480805449, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಉಡುಪಿ ದೂ.ಸಂಖ್ಯೆ: 0820-2520333, 9480805431 ಗೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story