ಅಂದರ್ಬಾಹರ್: ಆರು ಮಂದಿ ಸೆರೆ
ಗಂಗೊಳ್ಳಿ, ಆ.18: ಮರವಂತೆ ಗ್ರಾಮದ ಗಾಂಧಿನಗರ ಎಂಬಲ್ಲಿ ಆ.17 ರಂದು ಸಂಜೆ ವೇಳೆ ಅಂದರ್ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಾಗೂರು ಗ್ರಾಮದ ಸಂತೋಷ(27), ನವೀನ (23), ನಾವುಂದ ಗ್ರಾಮದ ಆಶೀಫ್(29), ಸುಜಾವು(32), ಅಬ್ಬಾಸ್(46), ನವಾಜ್(23) ಬಂಧಿತ ಆರೋಪಿಗಳು. ಇವರಿಂದ 4,800ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story