ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ದಿಢೀರ್ ವರ್ಗಾವಣೆ
ಜಿ. ಜಗದೀಶ್ ನೂತನ ಜಿಲ್ಲಾಧಿಕಾರಿ
ಉಡುಪಿ, ಆ.20: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಜಿ.ಜಗದೀಶ್
ಅವರ ಸ್ಥಾನಕ್ಕೆ ಈಗ ಕೋಲಾರ ಜಿ.ಪಂ.ನಲ್ಲಿ ಮುಖ್ಯಕಾರ್ಯನಿರ್ವಣಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಜಿ. ಜಗದೀಶ್ರನ್ನು ನಿಯುಕ್ತಿಗೊಳಿಸಲಾಗಿದೆ.
ಹೆಪ್ಸಿಬಾ ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆಗೆ ನಿಯೋಜಿಸಲಾಗಿಲ್ಲ. ಹೆಪ್ಸಿಬಾ ಅವರು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸ್ಥಾನಕ್ಕೆ ಫೆಬ್ರವರಿ ತಿಂಗಳಲ್ಲಿ ವರ್ಗಾವಣೆಗೊಂಡಿದ್ದರು.
Next Story