ಆ.25 : ‘ಐಡೆಕೊರ್’ ಫರ್ನಿಶಿಂಗ್ ಮಳಿಗೆ ಉದ್ಘಾಟನೆ
ಮಂಗಳೂರು, ಆ.22: ಐಡೆಕೊರ್ ಫರ್ನಿಶಿಂಗ್ ನೂತನ ಮಳಿಗೆಯು ಆ. 25ರಂದು ಬೆಳಗ್ಗೆ 9:30ಕ್ಕೆ ನಗರದ ಕಂಕನಾಡಿಯ ಫಳ್ನೀರ್ ರಸ್ತೆಯ ಅದೊನೈ ಟವರ್ಸ್ನ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.
ಪ್ರತಿಷ್ಠಿತ ಬ್ರ್ಯಾಂಡ್ ಗಳಾದ ‘ಡಿಡೆಕೊರ್’, ‘ಕರ್ಲ್-ಆನ್’ನ ಉತ್ಪನ್ನಗಳಾದ ಕರ್ಟನ್ಸ್, ಅಪ್ ಹೊಲ್ಸ್ಟ್ರಿ, ವಾಲ್ಪೇಪರ್ ಸೇರಿದಂತೆ ಗೃಹೋಪಯೋಗಿ ಹಾಗು ಆಲಂಕಾರಿಕ ಉತ್ಪನ್ನಗಳ ಬಗೆ ಬಗೆಯ, ವಿಶಾಲ ಸಂಗ್ರಹ ಇಲ್ಲಿ ಲಭ್ಯ ಎಂದು ಪಾಲುದಾರರಾದ ನಝೀರ್ ಹುಸೈನ್ ಹಾಗು ಎಸ್.ಶೇಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಐಡೆಕೊರ್ ಫರ್ನಿಶಿಂಗ್ ನೂತನ ಮಳಿಗೆಯನ್ನು ಮಂಗಳೂರಿನ ವಿಶ್ವಾಸ್ ಬಾವ ಬಿಲ್ಡರ್ಸ್ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಬ್ಯಾರೀಸ್ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಪ್ಲಾಮಾ ಬಿಲ್ಡರ್ಸ್ನ ಚೇರ್ಮನ್ ಪಿ.ಎಂ.ಎ. ರಝಾಕ್, ಆಳ್ವ ಆ್ಯಂಡ್ ಅಸೋಸಿಯೇಟ್ಸ್ನ ವಿನ್ಯಾಸಕಾರ ಸುಪ್ರಿತ್ ಆಳ್ವ, ಹಿದಾಯ ಫೌಂಡೇಶನ್ ಚೇರ್ಮನ್ ಮನ್ಸೂರ್ ಅಹ್ಮದ್ ಆಝಾದ್, ಇಂಡಿಯನ್ ಡಿಸೈನ್ ಸ್ಕೂಲ್ನ ಚೇರ್ಮನ್ ಎ.ಆರ್.ಮುಹಮ್ಮದ್ ನಿಸ್ಸಾರ್, ಕೆಎಸ್ಎ ಮತ್ತು ಬಹ್ರೇನ್ನ ಟ್ರೈಡೆಂಟ್ ಗ್ರೂಪ್ನ ಝೈನುಲ್ ಅಬಿದ್, ಥೀಮ್ ಇಂಟೀರಿಯರ್ಸ್ನ ಎ.ಎಚ್. ಶಾನವಾಝ್, ಅಡ್ಡೂರಿನ ಎಸ್.ಕ್ಯೂ. ಅಸೋಸಿಯೇಟ್ಸ್ನ ಮುಸ್ತಫಾ ಡಮ್ಮಲ, ಮೂಲರಪಟ್ನ ಮುತ್ತೂರು ಎಂಟರ್ಪ್ರೈಸಸ್ನ ಬಶೀರ್ ಹಸನ್ ವರತಿಲ್, ಶಾಲಿಮಾರ್ ರಿಯಾಲ್ಟಿ ಹೋಲ್ಡಿಂಗ್ಸ್ನ ಬಶೀರ್ ಅಹ್ಮದ್ ಆಗಮಿಸಲಿದ್ದಾರೆ.