ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಸ್ಕೂಲ್ : ಅರ್ಜಿ ಆಹ್ವಾನ
ಮಂಗಳೂರು : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್ 2020-21ರ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಆರಂಭಿಸಲು ಆಸಕ್ತಿ ಮತ್ತು ಸಾಮರ್ಥ್ಯ ಇರುವ ಮೊಹಲ್ಲಾ ಜಮಾಅತ್ ಸಮಿತಿಗಳು, ಸಂಘ ಸಂಸ್ಥೆಗಳು ಹಾಗೂ ಟ್ರಸ್ಟ್ಗಳಿಂದ ಅರ್ಜಿ ಆಹ್ವಾನಿಸಿದೆ.
ಅಲ್ ಬಿರ್ರ್ ನ ನಿಬಂಧನೆಗಳಲ್ಲಿ ತಿಳಿಸುವ ಮೂಲ ಸೌಕರ್ಯವನ್ನು ಸಜ್ಜುಗೊಳಿಸುವವರಿಗೆ ಅರ್ಜಿ ಸಲ್ಲಿಸಬಹುದು. ಇಬ್ಬರು ಅರ್ಹ ಮತ್ತು ಸಮರ್ಥ ಶಿಕ್ಷಕರು ಅರ್ಜಿಯನ್ನೂ ಒಳಗೊಂಡಿರಬೇಕು. ಪರಿಣಿತರ ಸಮಿತಿಯ ವರದಿಯ ಆಧಾರದ ಮೇಲೆ ಅಂಗೀಕಾರ ನೀಡಲಾಗುತ್ತದೆ. 600 ರೂ.ಗಳನ್ನು ಪಾವತಿಸಿ ಪ್ರೋಸ್ಪೆಕ್ಟಸ್ ಮತ್ತು ಅರ್ಜಿಯನ್ನು ಈ ಕೆಳಗಿನ ಸ್ಥಳಗಳಿಂದ ನೇರವಾಗಿ ಪಡೆದುಕೊಳ್ಳಬಹುದಾಗಿದೆ.
2019ರ ಆ.30 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ದೂ. 09743704212 ಸಂಪರ್ಕಿಸುವಂತೆ ಕರ್ನಾಟಕ ಅಲ್ ಬಿರ್ರ್ ಕೋಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷತೆಗಳು
-2019ರ ಜೂನ್ ತಿಂಗಳ ವೇಳೆಗೆ ಮೂರುವರೆ ವರ್ಷ ದಾಟಿದ, ನಾಲ್ಕುವರೆ ವರ್ಷ ದಾಟದ ಮಕ್ಕಳಿಗೆ ಪ್ರವೇಶಾತಿ.
-ಅರಬಿಕ್, ಇಂಗ್ಲಿಷ್, ಗಣಿತ, ಮಾತೃಭಾಷೆ, ಪರಿಸರ ವಿಜ್ಞಾನ ವಿಷಯಗಳಲ್ಲಿ ತರಬೇತಿ
-ನುರಿತ ಶಿಕ್ಷಕರು ಮತ್ತು ಮಕ್ಕಳ ಪರಿಪಾಲಕರು
-ಕುರ್ಆನ್, ಹದೀಸ್, ಪ್ರಾರ್ಥನೆಗಳ ಕಲಿಕೆ
-ಪ್ರತಿಭಾ ಸ್ಪರ್ಧೆ - ಫೆಸ್ಟ್ಗಳು
-ಸ್ಮಾರ್ಟ್ ಕ್ಲಾಸ್ ರೂಂ - ಶಿಸುಸ್ನೇಹಿ ಕ್ಯಾಂಪಸ್