ಆ. 27ರಂದು ಕಾಪು ತಾಲೂಕು ಜಮೀಯ್ಯತುಲ್ ಫಲಾಹ್ ಮಹಾ ಸಭೆ
ಕಾಪು: ಕಾಪು ತಾಲೂಕು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಮಹಾಸಭೆ ಆ. 27ರಂದು ಸಂಜೆ 4.30 ಕ್ಕೆ ಕಾಪು ಸಿಟಿ ಸೆಂಟರ್ ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆಯಲಿದೆ.
ವೀಕ್ಷಕರಾಗಿ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ. ಕೆ. ಶಾಹುಲ್ ಹಮೀದ್ ಭಾಗವಹಿಸಲಿರುವರು. ಶಭಿ ಅಹ್ಮದ್ ಖಾಝಿ ಅಧ್ಯಕ್ಷತೆ ವಹಿಸುವರು. ಮುಂದಿನ ಎರಡು ವರ್ಷದ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಲಿದ್ದು, ತಾಲೂಕಿನ ಎಲ್ಲಾ ಸದಸ್ಯರು ಹಾಜರಿರಬೇಕಾಗಿ ಸಂಸ್ಥೆಯ ಮಾಧ್ಯಮ ಕಾರ್ಯದರ್ಶಿ ಆನ್ವರ್ ಅಲಿ ಕಾಪು ತಿಳಿಸಿದ್ದಾರೆ.
Next Story