ಬೆಳುವಾಯಿ: ಬಿ. ಕೆ. ಖಾಸಿಂ ಸಾಹೇಬ್ ನಿಧನ
ಮಂಗಳೂರು, ಆ. 25 : ಮೂಲತಃ ಬೆಳುವಾಯಿಯವರಾದ ಈಗ ಮಂಗಳೂರು ನಿವಾಸಿ ಬಿ. ಕೆ. ಖಾಸಿಂ ಸಾಹೇಬ್ ಅವರು ರವಿವಾರ ಸಂಜೆ ಅಲ್ಪ ಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದ ಖಾಸಿಂ ಸಾಹೇಬ್ ಅವರು ಪತ್ನಿ, ಆರು ಗಂಡು ಮಕ್ಕಳು, ಒಬ್ಬ ಮಗಳು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸೋಮವಾರ ಮುಂಜಾನೆ ಫಜ್ರ್ ನಮಾಝ್ ಬಳಿಕ ಬೆಳುವಾಯಿ ಮಸೀದಿ ವಠಾರದಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
Next Story