ನಾಳೆಯಿಂದ ದಕ್ಷಿಣ ವಲಯ ಬಾಲ್ಬ್ಯಾಡ್ಮಿಂಟನ್
ಮೂಡುಬಿದಿರೆ, ಮೇ 5: ಕರ್ನಾಟಕ ಬಾಲ್ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಮೇ 7 ಹಾಗೂ 8 ರಂದು 40ನೆ ದಕ್ಷಿಣ ವಲಯ ಅಂತಾರಾಜ್ಯ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮೂಡುಬಿದಿರೆಯಲ್ಲಿ ನಡೆಯಲಿದೆ.
ಭಾರತೀಯ ಬಾಲ್ಬ್ಯಾಡ್ಮಿಂಟನ್ ಫೆಡರೇಶನ್ ನಿರ್ದೇಶನ ದಲ್ಲಿ ನಡೆಯಲಿರುವ ಈ ಚಾಂಪಿಯನ್ಶಿಪ್ನಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ವಿಜೇತ ಹಾಗೂ ರನ್ನರ್ಸ್ ಅಪ್ ಪ್ರಶಸ್ತಿ ಗಳಿಸಿದ ತಂಡಗಳು ಚಂಡಿಗಡದಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತರ್ ವಲಯ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲಿವೆ. ಮೇ 7ರಂದು ಪಂದ್ಯಾವಳಿಯನ್ನು ಬೆಳಗ್ಗೆ 9:15ಕ್ಕೆ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದು, ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿರುವರು.
Next Story