ಕಂಕನಾಡಿ: ಅಕ್ರಮ ಕಟ್ಟಡ ನೆಲಸಮ
ಮಂಗಳೂರು, ಆ.29: ನಗರದ ಕಂಕನಾಡಿ ಜಂಕ್ಷನ್ ಬಳಿಯ ಅಕ್ರಮ ಕಟ್ಟಡವೊಂದನ್ನು ನ್ಯಾಯಾಲಯದ ಆದೇಶದ ಮೇರೆಗೆ ಮಂಗಳೂರು ಮನಪಾ ಅಧಿಕಾರಿಗಳು ಬುಧವಾರ ಮುಂಜಾನೆ ಪೊಲೀಸರ ಸಹಕಾರದೊಂದಿಗೆ ನೆಲಸಮಗೊಳಿಸಿದ್ದಾರೆ.
ತರಕಾರಿ, ಹಣ್ಣುಹಂಪಲು ಅಂಗಡಿಗಳು ಇಲ್ಲಿತ್ತು. ಕೆಲವು ವರ್ಷದಿಂದ ಮನಪಾ ಮತ್ತು ಅಂಗಡಿದಾರರ ಮಧ್ಯೆ ವ್ಯಾಜ್ಯವಿದ್ದು, ಈ ಹಿಂದೆಯೇ ಇದರ ತೆರವಿಗೆ ಮನಪಾ ಅಧಿಕಾರಿಗಳು ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಅಂಗಡಿ ಮಾಲಕರು ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ನೆಲಸಮಗೊಳಿಸಲಾಗಿದೆ.