ಶಿರ್ವ: ಒಂಟಿ ಮಹಿಳೆ ಮೃತ್ಯು
ಶಿರ್ವ, ಸೆ.4: ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ಳೆ ಗ್ರಾಮದ ಸಡಂಬೈಲು ಮುಟ್ಟಿಕಲ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಮುಟ್ಟಿಕಲ್ಲು ನಿವಾಸಿ ಯಶೋಧ ನಾಯಕ್ ಪಿಲ್ಲು(80) ಎಂದು ಗುರುತಿಸಲಾಗಿದೆ.
ಇವರ ಮಗ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಅದರ ನಂತರ ಇವರು ಒಂಟಿಯಾಗಿ ವಾಸ ಮಾಡುತ್ತಿದ್ದರೆನ್ನಲಾಗಿದೆ. ಇವರು ಮೂರು ದಿನಗಳ ಹಿಂದೆ ಮನೆಯ ಕೋಣೆಯ ಮಂಚದ ಮೇಲೆ ಮಲಗಿ ದಲ್ಲಿಯೇ ಮೃತಪಟ್ಟಿದ್ದು, ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ಸೆ.3ರಂದು ರಾತ್ರಿ 8 ಗಂಟೆಗೆ ಸುಮಾರಿಗೆ ಇವರ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story