ಮಂಗಳೂರು: ಬಾಲಕಿಯ ಅತ್ಯಾಚಾರ ಯತ್ನ ಪ್ರಕರಣದ ಆರೋಪಿ ಸೆರೆ
ಮಂಗಳೂರು, ಸೆ.7: ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕಿನ ಕಳವಾರು ಕುರ್ಸುಗುಡ್ಡೆ ನಿವಾಸಿ ಅಬ್ದುಲ್ಲಾ ಯಾನೆ ಬೇಟಾ (21) ಬಂಧಿತ ಆರೋಪಿ.
‘ಸೆ.4ರಂದು ಆರೋಪಿಯು ಬಾಲಕಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಚೀರಿದ್ದಾಳೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 448 (ಅಕ್ರಮ ಮನೆ ಪ್ರವೇಶ), 354 (ಮಹಿಳೆ ಮೇಲೆ ಹಲ್ಲೆ), 506 (ಬೆದರಿಕೆ), ಪೋಕ್ಸೋ ಕಾಯ್ದೆ 8 ಮತ್ತು 12 ಕಲಂನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story