ಸೆ.8ರಂದು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವ್ಯಾಪ್ತಿಯ 3 ಸೆಕ್ಟರ್ ರಕ್ತದಾನ ಶಿಬಿರ
ಸುರತ್ಕಲ್, ಸೆ. 7: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇದರ 112ನೇ ರಕ್ತದಾನ ಶಿಬಿರವು ಸೆ. 8ರಂದು ಸುರತ್ಕಲ್ ಸೆಕ್ಟರ್ ಮತ್ತು ಮುಕ್ಕ ಶಾಖೆ ವತಿಯಿಂದ ಯೆನೆಪೊಯ ಮೆಡಿಕಲ್ ಕಾಲೇಜು ದೇರಳಕಟ್ಟೆ, ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ, ಮುಕ್ಕದಲ್ಲಿ ನಡೆಯಲಿದೆ.
113ನೇ ರಕ್ತದಾನ ಶಿಬಿರವು ಕಾಟಿಪಳ್ಳ ಸೆಕ್ಟರ್ ಇದರ ವತಿಯಿಂದ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ, ಮಂಗಳೂರು ಇದರ ಸಹಭಾಗಿತ್ವದಲ್ಲಿ ಜಾಸ್ಮೀನ್ ಮಹಲ್ ಕಾಟಿಪಳ್ಳದಲ್ಲಿ ನಡೆಯಲಿದೆ.
114ನೇ ರಕ್ತದಾನ ಶಿಬಿರವು ಮುಲ್ಕಿ ಸೆಕ್ಟರ್ ಇದರ ವತಿಯಿಂದ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಇದರ ಸಹಭಾಗಿತ್ವದಲ್ಲಿ ಯುಗ ಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ನಡೆಯಲಿದೆ.
ಸುರತ್ಕಲ್ ಡಿವಿಷನ್ ವ್ಯಾಪ್ತಿಯಲ್ಲಿ ಬರುವ ಈ ಮೂರು ಕೇಂದ್ರಗಳಲ್ಲಿ ಒಂದೇ ದಿವಸದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರಕ್ಕೆ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ , ದಕ್ಷಿಣ ಕನ್ನಡ ವೆಸ್ಟ್ ರೆನ್, ಹಾಗೂ ಸುರತ್ಕಲ್ ಡಿವಿಷನ್ ನಾಯಕರು ಭಾಗವಹಿಸಲಿದ್ದಾರೆ.