ಕಲ್ಲರ್ಪೆ: ಆಯಿಲ್ ಸಂಸ್ಕರಣಾ ಘಟಕದಿಂದ ಕಳವು
ಪುತ್ತೂರು: ಆಯಿಲ್ ಸಂಸ್ಕರಣಾ ಘಟಕವೊಂದರಿಂದ ಸುಮಾರು 22 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಸೋಮವಾರ ನಡೆದಿದೆ.
ಕಲ್ಲರ್ಪೆಯಲ್ಲಿರುವ ಆಯಿಲ್ ಸಂಸ್ಕರಣಾ ಘಟಕವಾಗಿರುವ ಹೃತಿಕ ಆಗ್ರ್ರೋ ಪ್ರೈ ಲಿಮಿಟೆಡ್ ಸಂಸ್ಥೆಯಲ್ಲಿ ಈ ಕಳವು ನಡೆದಿದ್ದು, ಘಟಕದ ಶೆಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಘಟಕದಲ್ಲಿದ್ದ ಕಂಪ್ಯೂಟರ್, ಬಿಲ್ಲಿಂಗ್ ಮೇಷಿನ್, ಇನ್ವರ್ಟರ್, ಪ್ಯಾನ್ನ್ನು ಕಳವು ಮಾಡಿದಿದ್ದಾರೆ. ಸಂಸ್ಕರಣ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಘಟಕವನ್ನು ಬಂದ್ ಮಾಡಲಾಗಿತ್ತು.
ಈ ಬಗ್ಗೆ ಸಂಪ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story