ಹಿರಾ ವಿಮೆನ್ಸ್ ಕಾಲೇಜ್ ನಲ್ಲಿ ಉಪನ್ಯಾಸ ಕಾರ್ಯಕ್ರಮ
ಮಂಗಳೂರು: ಹಿರಾ ವಿಮೆನ್ಸ್ ಕಾಲೇಜು ಬಬ್ಬುಕಟ್ಟೆ ಇದರ ವತಿಯಿಂದ ಹಿರಾ ಸಭಾಂಗಣದಲ್ಲಿಉಪನ್ಯಾಸ ಕಾರ್ಯಕ್ರಮ ನಡೆಯಿತು.
ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಇದರ ನ್ಯಾಷನಲ್ ಸೆಕ್ರೆಟರಿ ರಹ್ಮತುನ್ನೀಸಾ ಸಾಹಿಬ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ, ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಅಮತುರ್ರಝಾಕ್ ಸಾಹಿಬ ಅವರು ಉಪನ್ಯಾಸ ನೀಡಿದರು.
ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ, ಯುವ ಜನತೆ ಎದುರಿಸುವ ಸಮಸ್ಯೆಗಳು ಹಾಗೂ ಪರಿಹಾರ, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಬೇಕೆಂಬುದರ ಬಗ್ಗೆ ಮುಕ್ತ ಚರ್ಚೆ ನಡೆಸಿದರು.
ವೇದಿಕೆಯಲ್ಲಿ ಘಟಕದ ಜಿಲ್ಲಾ ಸಂಚಾಲಕಿ ಸಮೀನಾ ನೂರ್, ನಗರ ಸಂಚಾಲಕಿ ಸಮೀನಾ ಅಫ್ಶಾನ್, ಉಪ ಸಂಚಾಲಕಿ ಸುಮಯ್ಯ ಹಮೀದುಲ್ಲಾಹ್, ಪ್ರಾಂಶುಪಾಲೆ ಭಾರತಿ ಎಂ.ಆರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಹಲೀಮಾ ಝಿಕ್ರಾ ಕಾರ್ಯಕ್ರಮ ನಿರೂಪಿಸಿ,ವಿದ್ಯಾರ್ಥಿನಿ ಅಶ್ಫಿಯ ವಂದಿಸಿದರು.
Next Story