ಕೊಂಕಣಿ ಚಲನಚಿತ್ರ 'ನಿರ್ಮಿಲ್ಲೆಂ ನಿರ್ಮೋಣೆಂ'ಮಲೆಯಾಳಂಗೆ ಡಬ್ಬಿಂಗ್: ಮೆಲ್ವಿನ್ ಎಲ್ವಿಲ್
ಮಂಗಳೂರು, ಸೆ.13: ಕೊಂಕಣಿ ಚಲನಚಿತ್ರ 'ನಿರ್ಮಿಲ್ಲೆಂ ನಿರ್ಮೋಣೆಂ'ಮಲೆಯಾಳಂಗೆ ಡಬ್ಬಿಂಗ್ ಆಗಲಿದೆ ಎಂದು ಚಿತ್ರ ದ ನಿರ್ದೇಶಕ ಮೆಲ್ವಿನ್ ಎಲ್ವಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಚಲನಚಿತ್ರ ಈಗಾಗಲೇ ಪ್ರದರ್ಶನ ಕಂಡ ಪ್ರದೇಶಗಳಲ್ಲಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಅ. 2ರಂದು ಕಾಸರಗೋಡಿನಲ್ಲಿ ಹಾಗೂ ಸುರತ್ಕಲ್ ನಲ್ಲಿ ತರೆ ಕಾಣಲಿದೆ. ಅಕ್ಟೋಬರ್ 15ರಂದು ಇಸ್ರೇಲ್, ನವೆಂಬರ್ 15ರಂದು ಕುವೈಟ್ ನಲ್ಲಿ ಪ್ರದರ್ಶನ ಗೊಳ್ಳಲಿದೆ.
ಮಲೆಯಾಳಂ ನಲ್ಲಿ ಈಗಾಗಲೇ 57ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಿರುವ ಎಂ.ಸಿನೆಮಾಸ್ ತಂಡ ಈ ಚಿತ್ರವನ್ನು ಡಬ್ಬಿಂಗ್ ಮಾಡಲು ಮುಂದೆ ಬಂದಿದೆ. ಇದರೊಂದಿಗೆ ಪ್ರಥಮ ಬಾರಿಗೆ ಕೊಂಕಣಿ ಚಲನ ಚಿತ್ರ ವೊಂದು ಮಲೆಯಾ ಳಂ ಭಾಷೆಗೆ ಡಬ್ಬಿಂಗ್ ಆಗುವ ದಾಖಲೆ ನಿರ್ಮಾಣ ವಾಗಲಿದೆ ಎಂದು ಮೆಲ್ವಿನ್ ಎಲ್ವೆಲ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ಹೆನ್ರಿ ಡಿ ಸಿಲ್ವಾ, ಚಿತ್ರದ ವಿತರಕ ಪ್ರಸಾದ್ ಮೊದಲಾದ ವರು ಉಪಸ್ಥಿತರಿದ್ದರು.
Next Story