ಸೋಲಾರ್ ಬೀದಿದೀಪದ ಬ್ಯಾಟರಿ ಕಳವು
ಶಿರ್ವ, ಸೆ.14: ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಸಲಾದ ಸೋಲಾರ್ ಬೀದಿ ದೀಪದ ಬ್ಯಾಟರಿಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಪಿಲಾರು ಗ್ರಾಮದ ಪರಾಡಿ ಕೋಡ್ದಬ್ಬು ದೈವಸ್ಥಾನದ ಬಳಿ, ಕುಂಜಿಗುಡ್ಡೆ ಚಂದ್ರ ಪೂಜಾರಿ ಮನೆಯ ಬಳಿ, ಜಾಲಮೇಲು ಚರ್ಚ್ ಬಳಿ ಹಾಗೂ ಪಿಲಾರು ಕೋಳಿ ಫಾರ್ಮ್ ಬಳಿ ಅಳವಡಿಸಲಾದ ಒಟ್ಟು 4 ಸೋಲಾರ್ ಬೀದಿ ದೀಪದ ಬ್ಯಾಟರಿಗಳನ್ನು ಸೆ.7ರಂದು ರಾತ್ರಿ ವೇಳೆ ಕಳವು ಮಾಡ ಲಾಗಿದ್ದು, ಇವುಗಳ ಮೌಲ್ಯ 32,000 ರೂ. ಎಂದು ಅಂದಾಜಿಸಲಾಗಿದೆ.
ಪಂಚಾಯತ್ ಲೆಕ್ಕ ಸಹಾಯಕ ಶಿವರಾಮ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story