ಕುತ್ತಾರು: ಸೆ. 15ರಂದು ಎಸ್ಸೆಸ್ಸೆಫ್ ವತಿಯಿಂದ ರಕ್ತದಾನ ಶಿಬಿರ
ಕುತ್ತಾರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡ ಬ್ಲಡ್ ಸೈಬೋ 115 ನೇ ರಕ್ತದಾನ ಶಿಬಿರವು ಕುತ್ತಾರು ಸರಕಾರಿ ಶಾಲೆಯಲ್ಲಿ ಸೆ.15ರಂದು ಬೆಳಗ್ಗೆ 9.30 ರಿಂದ ಅಪಾರಹ್ನ 2 ಗಂಟೆಯವರೆಗೆ ನಡೆಯಲಿದೆ.
ಸೆಕ್ಟರ್ ಅಧ್ಯಕ್ಷ ಶಮೀರ್ ಸೇವಂತಿಗುಡ್ಡೆ ನೇತೃತ್ವದಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಮತ್ತು ಮದನಿನಗರ ಯುನಿಟ್ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story