ಮನೆಯೊಳಗೆ ಜಾರಿ ಬಿದ್ದು ಮೃತ್ಯು
ಬ್ರಹ್ಮಾವರ, ಸೆ.16: ಮನೆಯೊಳಗೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ.16ರಂದು ಬೆಳಗ್ಗೆ 6.30ರ ಸುಮಾರಿಗೆ ಉಪ್ಪೂರು ಎಂಬಲ್ಲಿ ನಡೆದಿದೆ.
ಮೃತರನ್ನು ಉಪ್ಪೂರಿನ ಹಿಲರಿ ಮಸ್ಕರೇನಸ್(49) ಎಂದು ಗುರುತಿಸ ಲಾಗಿದೆ. ಇವರು ಮನೆಯಿಂದ ಶೌಚಾಲಯಕ್ಕೆ ಹೋಗಿ ಬರುವಾಗ ಮನೆಯ ಒಳಗಡೆ ಕಾಲುಜಾರಿ ಆಯಾತಪ್ಪಿಬಿದ್ದು ತಲೆಗೆ ಗಂಭೀರವಾಗಿ ಗಾಯ ಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story