ತೋಡಾರು : ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರ್ಸ್ ಡೇ
ಮೂಡುಬಿದಿರೆ : ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಎಸ್ ಮತ್ತು ಐಎಸ್ ಇಲಾಖೆಯ ವತಿಯಿಂದ ಮತ್ತು ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್ ಮತ್ತು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯದ ಸಹಯೋಗದೊಂದಿಗೆ 5 ನೇ ಇಂಜಿನಿಯರ್ ಡೇ ಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರದ ಡಾ. ಅಶೋಕ್ ಕುಮಾರ್ ಟಿ ಅವರು "ಇಮೇಜ್ ಪ್ರೊಸೆಸಿಂಗ್" ಎಂಬ ತಾಂತ್ರಿಕ ವಿಷಯದ ಕುರಿತು ಮಾತನಾಡಿದರು.
ಮೂಡುಬಿದಿರೆ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಆರ್.ಜಿ ಡಿಸೋಜ, ಅಧ್ಯಕ್ಷತೆ ವಹಿಸಿ ಎಂಜಿನಿಯರ್ಗಳ ದಿನಾಚರಣೆಯ ಕುರಿತು ವಿವರಿಸಿದರು. ಪ್ರೊ. ಗುರುಪ್ರಸಾದ್ ಜಿ ಸ್ವಾಗತಿಸಿದರು, ಪ್ರೊ. ಪಾಂಡು ನಾಯಕ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು, ಪ್ರೊ. ಐಶ್ವರ್ಯ ನಿರೂಪಿಸಿದರು ಮತ್ತು ಪ್ರೊ ಮಂಜುನಾಥ್ ರಾಯ್ಕರ್ ಅವರು ವಂದಿಸಿದರು.
Next Story