ಉಡುಪಿ: ಸೆ.20 ರಿಂದ ಮಂಗಳೂರು ವಿವಿ ಚೆಸ್
ಉಡುಪಿ, ಸೆ.18: ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು ಪುರುಷ ಹಾಗೂ ಮಹಿಳೆಯರ ಚೆಸ್ ಚಾಂಪಿಯನ್ಶಿಪ್ ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಸೆ.20 ಮತ್ತು 21ರಂದು ನಡೆಯಲಿದೆ. ಚಾಂಪಿಯನ್ಷಿಪ್ನನು ಸೆ.20ರ ಶುಕ್ರವಾರ ಬೆಳಗ್ಗೆ 9:30ಕ್ಕೆ ಪಿಐಎಂನ ಪ್ರಜ್ಞಾ ಹಾಲಿನಲ್ಲಿ ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಪಿಐಎಂನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್ ಉಡುಪಿ ಹಾಗೂ ಮಂಗಳೂರು ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾಲೇಜಿನ ಗೌವ ಕೋಶಾಧಿಕಾರಿ ಪ್ರದೀಪ್ಕುಮಾರ್ ುುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಜೇತ ಪುರುಷ ತಂಡಕ್ಕೆ ಗುಲಾಬಿ ಶಿವರಾಮ ನೋಂಡಾ ರೋಲಿಂಗ್ ಟ್ರೋಫಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುವುದು ಎಂದು ಪಿಐಎಂ ನಿರ್ದೇಶಕ ಡಾ.ಭರತ್ ಹಾಗೂ ಕ್ರೀಡಾ ಸಂಯೋಜಕ ಸುಕುಮಾರ್ ತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.