ವಿಟ್ಲ ಜಮಾಅತ್ ಯೂತ್ ವಿಂಗ್ ಅಧ್ಯಕ್ಷರಾಗಿ ರಫೀಕ್ ಪೊನ್ನೋಟ್ಟು
ವಿಟ್ಲ, ಸೆ. 21: ವಿಟ್ಲ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿಯ ಅಧೀನದಲ್ಲಿ ವಿಟ್ಲ ಜಮಾಅತ್ ಯೂತ್ ವಿಂಗ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಮಸೀದಿ ಖತೀಬ್ ಮುಹಮ್ಮದ್ ಅಲಿ ಇರ್ಫಾನಿ ಫೈಝಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ವಿಂಗ್ನ ನೂತನ ಅಧ್ಯಕ್ಷರಾಗಿ ರಫೀಕ್ ಪೊನ್ನೋಟ್ಟು, ಸಂಚಾಲಕರಾಗಿ ವಿ.ಎಂ. ಅಬ್ದುಸ್ಸಮದ್, ಉಪಾಧ್ಯಕ್ಷರಾಗಿ ಪತ್ರಕರ್ತ ಮುಹಮ್ಮದ್ ಅಲಿ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ನಾಸಿರ್, ಜೊತೆ ಕಾರ್ಯದರ್ಶಿಯಾಗಿ ನವಾಝ್, ಖಜಾಂಚಿಯಾಗಿ ತೌಸಿಫ್ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಸಿನಾನ್ ಕಲ್ಲಿಪಾಲ ಅವರನ್ನು ಆಯ್ಕೆ ಮಾಡಲಾಯಿತು.
Next Story