‘ಮಲಬಾರ್ ಗೋಲ್ಡ್ 150ನೆ ಶೋರೂಂ’ ಸಂಭ್ರಮಾಚರಣೆ
ಉಡುಪಿ, ಮೇ 7: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ‘9 ದೇಶಗಳಲ್ಲಿ 150ನೆ ಶೋರೂಂ’ ಸಂಭ್ರಮ ಆಚರಣೆಯನ್ನು ಇಂದು ಉಡುಪಿ ನಗರದ ಮಸೀದಿ ರಸ್ತೆಯ ಗೀತಾಂಜಲಿ ಥಿಯೇಟರ್ ಬಳಿ ಇರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಕೇಕ್ ಕತ್ತರಿಸುವ ಮೂಲಕ ಈ ಸಂಭ್ರಮಾಚರಣೆಯನ್ನು ಉದ್ಘಾಟಿಸಿದರು.
ಮಲಬಾರ್ ಗೋಲ್ಡ್ ವ್ಯವಹಾರದ ಜೊತೆ ವಿದ್ಯಾರ್ಥಿವೇತನ, ಆರೋಗ್ಯ ನಿಧಿ ವಿತರಣೆಯಂತಹ ಸಾಮಾಜಿಕ ಕೆಲಸದಲ್ಲಿಯೂ ನಿರತವಾಗಿರುವುದು ಶ್ಲಾಘನೀಯ. ಮುಂದೆ ಇನ್ನಷ್ಟು ಮಳಿಗೆಗಳನ್ನು ತೆರೆದು ಜನರಿಗೆ ಉತ್ತಮ ಸೇವೆ ನೀಡಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾ ಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಸದಸ್ಯೆ ಸೆಲಿನಾ ಕರ್ಕಡ, ಮಲಬಾರ್ ಗೋಲ್ಡ್ನ ಉಡುಪಿ ಸ್ಟೋರ್ ಹೆಡ್ ಹಫೀಝ್ ರಹ್ಮಾನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.
Next Story