ಎಸ್ವೈಎಸ್: ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಸೆ.21: ಎಸ್ಸೆಸ್ಸೆಫ್ ರಹ್ಮಾನಿಯಾ ನಗರ ಮೇಗಿನಪಂಜಲ ಬ್ರಾಂಚ್ನ ಮಹಾಸಭೆಯ ಎಸ್ವೈಎಸ್ ಕೆಸಿ ರೋಡ್ ಸೆಂಟರ್ನ ಅಧ್ಯಕ್ಷ ಹಾಜಿ ಎನ್ಎಸ್ ಉಮರ್ ಮಾಸ್ಟರ್ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
2019-20ರ ಸಾಲಿಗೆ ನೂತನ ಅಧ್ಯಕ್ಷರಾಗಿ ಕೆಬಿ ಯಹ್ಯಾ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್, ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಸಹಿತ 15 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಎಸ್ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಂಎಸ್ಸೆಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾರ್ಗದರ್ಶನ ನೀಡಿದರು. ಬ್ರಾಂಚ್ ಅಧ್ಯಕ್ಷ ಯುಎ ಅಬ್ದುಲ್ ಅಝೀಝ್ ಸಖಾಫಿ ಉಪಸ್ಥಿತರಿದ್ದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ರಫೀಕ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಇಕ್ಬಾಲ್ ಲೆಕ್ಕಪತ್ರ ಮಂಡಿಸಿದರು. ವೀಕ್ಷಕರಾಗಿ ಎಸ್ವೈಎಫ್ ಕೆಸಿ ರೋಡ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಬಟ್ಟಪ್ಪಾಡಿ ಕೋಟೆಪುರ ಭಾಗವಹಿಸಿದ್ದರು. ಕಾರ್ಯದರ್ಶಿ ರಫೀಕ್ ವಂದಿಸಿದರು.
Next Story