ಹಿರಿಯ ಕಾಂಗ್ರೆಸ್ ಮುಖಂಡ ಹಿರಣ್ಯಾಕ್ಷ ಕೋಟ್ಯಾನ್ ನಿಧನ
ಬಜ್ಪೆ : ಹಿರಿಯ ಕಾಂಗ್ರೆಸ್ ಹಾಗೂ ಸಾಮಾಜಿಕ ಮುಂದಾಳು, ಹಾಲಿ ಪಂಚಾಯತ್ ಸದಸ್ಯ ಹಿರಣ್ಯಾಕ್ಷ ಕೋಟ್ಯಾನ್ (70)ಆಲ್ಪ ಕಾಲದ ಅನಾರೋಗ್ಯದಿಂದ ತಮ್ಮ ಸ್ವಗ್ರಹ ದಲ್ಲಿ ರವಿವಾರ ನಿಧನರಾಗಿದ್ದಾರೆ.
ಕರಿಯಣ್ಣ ಎಂದೇ ಜನಾನುರಾಗಿಯಾಗಿದ್ದ ಅವರು ಕಳೆದ 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು 2 ಬಾರಿ ಹಿಂದಿನ ಮಂಡಲ ಪಂಚಾಯತ್ ಸದಸ್ಯರಾಗಿ ನಂತರ ಕುಪ್ಪೆಪದವು ಪಂಚಾಯತ್ ಅಧ್ಯಕ್ಷರಾಗಿದ್ದರು.
ಕುಪ್ಪೆಪದವು ಗ್ರಾಮ ಪಂ. ಹಾಲಿ ಸದಸ್ಯರಾಗಿದ್ದ ಅವರು ಇಲ್ಲಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story