ಕಳವು ಪ್ರಕರಣ : ಸೊತ್ತು ಸಹಿತ ಆರೋಪಿ ಸೆರೆ
ಬಂಟ್ವಾಳ, ಅ. 15: ವಾರದ ಹಿಂದೆ ಬಿ.ಸಿ.ರೋಡಿನ ಅಂಗಡಿಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಸೊತ್ತು ಸಹಿತ ಆರೋಪಿಯನ್ನು ಬಂಟ್ವಾಳ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಸಾಲ್ಮರ ನಿವಾಸಿ ಕೆ.ಮಹಮ್ಮದ್ ಸಲಾಂ ಬಂಧಿತ ಆರೋಪಿ. ಬಂಧಿತನಿಂದ ಮೋಟಾರು ಸೈಕಲ್, ನಗದು ಸಹಿತ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ 60 ಸಾವಿರ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story