ರೂರಲ್ ಐಟಿ ಕ್ವಿಜ್ ನಲ್ಲಿ ನ್ಯೂಶಮ್ಸ್ ಸ್ಕೂಲ್ ತಂಡಕ್ಕೆ ನಾಲ್ಕನೇ ಸ್ಥಾನ
ಭಟ್ಕಳ: ಧಾರಡಾದ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಜರಗಿದ ವಿಭಾಗೀಯ ರೂರಲ್ ಐಟಿ ಕ್ವಿಝ್ ಸ್ಪರ್ಧೆಯಲ್ಲಿ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲಾ ತಂಡವು ನಾಲ್ಕನೇ ಸ್ಥಾನ ಪಡದುಕೊಂಡಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟಿಸಿಎಸ್ ಸಂಸ್ಥೆಯು ಪ್ರತಿವರ್ಷ ಶಾಲಾ ಹಂತದಿಂದ ರಾಜ್ಯಮಟ್ಟದ ವರೆಗೆ ರೂರಲ್ ಐಟಿ ಕ್ವಿಜ್ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು ಮಂಗಳವಾರ ನಡೆದ ಧಾರವಾಡ ವಿಭಾಗೀಯ ಮಟ್ಟದ ರೂರಲ್ ಐಟಿ ಕ್ವಿಜ್-2019 ರ ಸ್ಪರ್ಧೆಯಲ್ಲಿ 255 ತಂಡಗಳು ಭಾಗವಹಿಸಿದ್ದು ಎರಡು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ತಂಡದ ಸಯೀಫ್ ಸಿದ್ದಿ ಆಹ್ಮದ್ ಹಾಗೂ ವಖಾಸ್ ಕರಿಣಿಯವರ ತಂಡವು ಟಾಪ್ 6 ನಲ್ಲಿ ಸ್ಥಾನ ಪಡೆದು ಅಂತಿವi ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Next Story