ಮನೆಗೆ ನುಗ್ಗಿ ನಗದು ಕಳವು
ಮಲ್ಪೆ, ಅ.15: ಪಡುತೋನ್ಸೆ ಗ್ರಾಮದ ಹೂಡೆ ಸಿಂಡಿಕೇಟ್ ಬ್ಯಾಂಕ್ ಬಳಿಯ ಮನೆಯೊಂದಕ್ಕೆ ನುಗ್ಗಿ ಸಾವಿರಾರು ರೂ. ಮೊತ್ತದ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಲಲಿತ ತೋನ್ಸೆ(65) ಎಂಬವರು ಅ.7ರಂದು ಮನೆಗೆ ಬೀಗ ಹಾಕಿ ತಂಗಿಯ ಮನೆಯಾದ ಮಂಗಳೂರಿಗೆ ಹೋಗಿದ್ದು, ಅ.12ರಂದು ಬೆಳಗ್ಗೆ ವಾಪಾಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಅಡುಗೆ ಮನೆಯ ಮಾಡಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು, ರೂಮಿನ ಕಪಾಟಿನ ಲಾಕರ್ನ ಬೀಗವನ್ನು ಮುರಿದು ಅದರಲ್ಲಿದ್ದ 94,000ರೂ. ಕಳವು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story