ಸ್ಟೇಟ್ ಮಾಸ್ಟರ್ ಅಕ್ವಟಿಕ್ ಚಾಂಪಿಯನ್ ಶಿಪ್: ಮುಹಮ್ಮದ್ ಕಾಟಿಪಳ್ಳಗೆ ಮೂರು ಪದಕ
ಮಂಗಳೂರು, ಅ.16: ಕರ್ನಾಟಕ ಒಲಿಂಪಿಕ್ ಅಸೋಶಿಯೇಶನ್ ಬೆಂಗಳೂರಿನ ವಿಜಯ ನಗರದ ಅಕ್ವಟಿಕ್ ಕ್ಲಬ್ನಲ್ಲಿ ಇತ್ತೀಚೆಗೆ ಆಯೋಜಿಸಿದ 21ನೆ ಸ್ಟೇಟ್ ಮಾಸ್ಟರ್ ಅಕ್ವಟಿಕ್ ಚಾಂಪಿಯನ್ ಶಿಪ್ನಲ್ಲಿ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿದ ಪಾಂಡೇಶ್ವರ ನಿವಾಸಿ ಪಿ.ಎ.ಮುಹಮ್ಮದ್ ಕಾಟಿಪಳ್ಳ ಅವರಿಗೆ 4//50 ಮೀಟರ್ ಮಿಡ್ಲೆಯಲ್ಲಿ ಚಿನ್ನದ ಪದಕ, 200 ಮತ್ತು 100 ಮೀಟರ್ ಫ್ರೀ ಸ್ಟೈಲ್ಲ್ಲಿ 2 ಕಂಚಿನ ಪದಕ ಲಭಿಸಿದೆ.
ಅ.18ರಿಂದ 20ರವರೆಗೆ ಲಕ್ನೋದ ಸರೋಜಿನಿ ನಗರದಲ್ಲಿ ನಡೆಯುವ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳಲು ಇವರು ಅರ್ಹತೆ ಪಡೆದಿದ್ದಾರೆ. ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ನ ಸದಸ್ಯರಾಗಿರುವ ಇವರು ಸೀತಾರಾಮ ಶೆಟ್ಟಿ ಮತ್ತು ಪ್ರಶಾಂತ್ ಬೆಂಗ್ರೆ ಅವರಿಂದ ತರಬೇತು ಪಡೆದಿದ್ದಾರೆ.
Next Story