ಕೋಟ: ಟೆಂಪೊ ಢಿಕ್ಕಿ-ಸ್ಕೂಟಿ ಸವಾರ ಮೃತ್ಯು
ಕೋಟ, ಅ.17: ಟಾಟಾ ಏಸ್ ಟೆಂಪೊ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ಕೋಟ ಹೈಸ್ಕೂಲ್ ಎದುರಿನ ಕೋಟ ಮೂರುಕೈ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಸ್ಕೂಟಿ ಸವಾರ ಗುರುಪ್ರಸಾದ್ ಎಂದು ಗುರುತಿಸಲಾಗಿದೆ.
ಅವರು ಸಾಬರಕಟ್ಟೆ ಕಡೆಯಿಂದ ಬಂದು ಕೋಟ ಮೂರುಕೈ ಜಂಕ್ಷನ್ ದಾಟಿ ರಾ.ಹೆದ್ದಾರಿಯಲ್ಲಿ ಸಾಗುತಿದ್ದಾಗ ಉಡುಪಿ ಕಡೆಯಿಂದ ಕುಂದಾಪುರದತ್ತ ವೇಗವಾಗಿ ಧಾವಿಸಿ ಬಂದ ಟೆಂಪೋ, ಸ್ಕೂಟಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಸವಾರ ಎಸೆಯಲ್ಪಟ್ಟು, ಟೆಂಪೊ ಮೋಟಾರು ಸೈಕಲ್ನ್ನು 30 ಅಡಿ ದೂರು ಎಳೆದುಕೊಂಡು ಹೋಗಿತ್ತು. ತೀವ್ರವಾಗಿ ಗಾಯಗೊಂಡ ಗುರುಪ್ರಸಾದ್ರನ್ನು ಮೊದಲು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಬಳಿಕ ಮಣಿಪಾಲ ಕೆಎಂಸಿಗೆ ಕರೆದೊಯ್ದರೂ ಅವರು ಮಾರ್ಗಮಧ್ಯೆ ಮೃತಪಟ್ಟರು.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story