ಬ್ರಿಟಿಷರಿಗೆ ಶರಣಾಗತಿಯ ಪತ್ರ ಬರೆದ ಸಾವರ್ಕರ್‌ಗೆ ಭಾರತ ರತ್ನ ಯಾಕೆ ? | Vartha Bharati- ವಾರ್ತಾ ಭಾರತಿ

---

ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಪ್ರಶ್ನೆ

ಬ್ರಿಟಿಷರಿಗೆ ಶರಣಾಗತಿಯ ಪತ್ರ ಬರೆದ ಸಾವರ್ಕರ್‌ಗೆ ಭಾರತ ರತ್ನ ಯಾಕೆ ?

ಮಂಗಳೂರು, ಅ.20: ಜೈಲು ಸೇರಿದ ಎರಡು ವಾರದೊಳಗೆ ಬ್ರಿಟಿಷರಿಗೆ 6 ಬಾರಿ ಶರಣಾಗತಿಯ ಪತ್ರ ಬರೆದ ಸಾವರ್ಕರ್ ಸ್ವಾತಂತ್ರ ಯೋಧನಾಗಲು ಹೇಗೆ ಸಾಧ್ಯ? ಆತನಿಗೆ ಯಾಕೆ ಭಾರತ ರತ್ನ ಕೊಡಬೇಕು ? ಎಂದು ಕೆಪಿಸಿಸಿ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಸ್ವಾತಂತ್ರ ಲಭಿಸಿ 72 ವರ್ಷಗಳಾಗಿವೆ. ಬಿಜೆಪಿ ಪಕ್ಷವು ಅಸ್ತಿತ್ವಕ್ಕೆ ಬಂದು ಹಲವು ವರ್ಷಗಳಾಗಿವೆ. ಕೇಂದ್ರ ಮತ್ತು ರಾಜ್ಯಗಳಲ್ಲೂ ಬಿಜೆಪಿ ಆಡಳಿತ ನಡೆಸಿವೆ. ಈವರೆಗೂ ಸಾವರ್ಕರ್ ಪರ ಮಾತನಾಡದ ಬಿಜೆಪಿಗೆ ದಿಢೀರ್ ಪ್ರೀತಿ ಹುಟ್ಟಲು ಕಾರಣ ಏನು ? ಮರಾಠಿ ಬ್ರಾಹ್ಮಣನಾದ ಸಾವರ್ಕರ್‌ಗೆ ‘ಭಾರತ ರತ್ನ’ ಕೊಡುವ ಬಗ್ಗೆ ಪ್ರಸ್ತಾಪಿಸಿ ಜನರ ಭಾವನೆಯನ್ನು ಎತ್ತಿಕಟ್ಟಿಸಿಕೊಳ್ಳುವ ಮೂಲಕ ಬಿಜೆಪಿ ಚೆಲ್ಲಾಟವಾಡಲು ಮುಂದಾಗಿದೆ. ಮಹಾರಾಷ್ಟ್ರದ ಚುನಾವಣೆಯ ಮೇಲೆ ಕಣ್ಣಿಟ್ಟು ಬಿಜೆಪಿ ಹೀಗೆ ಮಾಡಿವೆ ಎಂದರು.

ಸಾವರ್ಕರ್ ಬದಲು ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಅರ್ಹವಾಗಿ ಸಿದ್ದಗಂಗಾ ಸ್ವಾಮೀಜಿಗೆ ಭಾರತ ರತ್ನ ಕೊಡಬೇಕು. ಆದರೆ, ಬಿಜೆಪಿಗರಿಗೆ ಅದು ಇಷ್ಟವಿಲ್ಲ. ಸಾವರ್ಕರ್ ಹೆಸರು ತೇಲಿಬಿಟ್ಟು ಜನರ ಭಾವನೆ ಕೆದಕುತ್ತಿದೆ. ಸಚಿವ ಸಿಟಿ ರವಿಗೆ ಕುಡಿದ ಮತ್ತಿನಲ್ಲಿ ಏನೇನು ಮಾಡಿದರು? ಸೆಕೆಂಟ್‌ಹ್ಯಾಂಡ್ ವಾಹನಗಳ ಮಾರಾಟಗಾರನಾಗಿದ್ದ ಸಿಟಿ ರವಿ ‘ಕೋಟಿ ರವಿ’ ಹೇಗಾದರು ಎಂಬುದು ನಾಡಿನ ಜನತೆಗೆ ತಿಳಿದಿದೆ. ಇಂತಹ ರವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಐವನ್ ಹೇಳಿದರು.

ಬಿಜೆಪಿಗೆ ಚುನಾವಣೆಯ ಸಂದರ್ಭ ರಾಷ್ಟ್ರಪ್ರೇಮಿಗಳು ರಾಷ್ಟ್ರದ್ರೋಹಿಗಳ ಹಾಗೆ ಮತ್ತು ಚುನಾವಣೆಯ ಬಳಿಕ ರಾಷ್ಟ್ರದ್ರೋಹಿಗಳು ರಾಷ್ಟ್ರಪ್ರೇಮಿಗಳ ಹಾಗೆ ಕಾಣುತ್ತಿರುವುದು ವಿಪರ್ಯಾಸ. ಬಿಜೆಪಿಯ ಆಡಳಿತದ ಅವಧಿಯಲ್ಲಿ ಏನೇನೂ ಅಭಿವೃದ್ಧಿಯಾಗಿಲ್ಲ. ಅದನ್ನು ಜನರು ಪ್ರಶ್ನಿಸಬಾರದು ಎಂಬ ನಿಟ್ಟಿನಲ್ಲಿ ಇಂತಹ ಭಾವನಾತ್ಮಕ ವಿಚಾರ ತೇಲಿ ಬಿಡುತ್ತಿದೆ ಎಂದು ಐವನ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಕವಿತಾ ಸನಿಲ್, ಪಕ್ಷದ ಮುಖಂಡರಾದ ಜಯಶೀಲಾ ಅಡ್ಯಂತಾಯ, ಪಿಯೂಸ್ ಮೊಂತೆರೋ, ಸದಾಶಿವ ಶೆಟ್ಟಿ, ನಝೀರ್ ಬಜಾಲ್, ಭಾಸ್ಕರ ರಾವ್, ನಾರಾಯಣ ಕೋಟ್ಯಾನ್ ಮತ್ತಿತರರಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top