ಮಂಗಳೂರು: 12 ದಿನ ಕಳೆದರೂ ಪತ್ತೆಯಾಗದ ಕಾಲೇಜು ವಿದ್ಯಾರ್ಥಿನಿ
ಮಂಗಳೂರು, ಅ.20: ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್(16) ಕುಟಿನ್ಹೋ ನಾಪತ್ತೆಯಾಗಿ 12 ದಿನ ಕಳೆದರೂ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ತಿಳಿದಬಂದಿದೆ.
ಮುಡಿಪು ನಿವಾಸಿಯಾಗಿರುವ ಫಿಯೋನಾ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅ.8ರಂದು ಮನೆಯಿಂದ ಹೊರಟು ಮಂಗಳೂರಿಗೆ ಬಂದವರು ಮರಳಿ ಮನೆಗೆ ಹೋಗದೆ ನಾಪತ್ತೆಯಾಗಿದ್ದಾರೆ. ಆಕೆಯ ಮನೆಯಿಂದ ತೆರಳುವಾಗ ಮೊಬೈಲ್ ಕೂಡಾ ಕೊಂಡೊಯ್ಯಲಿಲ್ಲ. ಪೋಷಕರು ಆತಂಕಿತರಾಗಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿಕ್ಕಿಲ್ಲ ಯಾವುದೇ ಮಾಹಿತಿ: ಕೋಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದು ವಿದ್ಯಾರ್ಥಿನಿಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಪ್ರಕರಣಕ್ಕೆ ಸಂಬಂಧಿಸಿ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಲಾಗಿದ್ದು, ಮೊಬೈಲ್ ನಂಬರ್ ಆಧಾರದಲ್ಲಿ ಹಿಂದಿನ ಕರೆ ದಾಖಲೆಗಳನ್ನು ಕೂಡಾ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story