ವಿಟ್ಲ: ಕೂಲಿ ಕೆಲಸಕ್ಕೆಂದು ತೆರಳಿದವರು ನಾಪತ್ತೆ
ವಿಟ್ಲ, ಅ. 21: ಕೂಲಿ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೋರ್ವ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ. ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ಮುಹಮ್ಮದ್ (38) ನಾಪತ್ತೆಯಾದ ವ್ಯಕ್ತಿ.
ಅ.19ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆಂದು ತೆರಳಿದ ಮಗ ಮನೆಗೆ ಹಿಂದಿರುಗಿಲ್ಲ. ಫೋನ್ ಕರೆಗೂ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎಂದು ತಾಯಿ ಬೀಫಾತುಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story