ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್: ಶಕ್ತಿ ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್
ಮಂಗಳೂರು, ಅ. 22: ವಾಮಂಜೂರಿನ ಸಂತ ರೈಮಂಡ್ಸ್ ಶಾಲೆಯಲ್ಲಿ ಜೆಎಸ್ಕೆಎ ಕರ್ನಾಟಕ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಮಂಗಳೂರು ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜಿನ ಏಳು ವಿದ್ಯಾರ್ಥಿಗಳು ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ.
ಶಕ್ತಿ ಶಾಲೆಯ ವಿದ್ಯಾರ್ಥಿಗಳಾದ ನಾಫಿ ಶೇಖ್ ಕಟ ಮತ್ತು ಕುಮಿಟೆ ಕರಾಟೆಯಲ್ಲಿ ಚಿನ್ನ ಮತ್ತು ಕಂಚು ಪಡೆದಿದ್ದಾರೆ. ಚಿರಂತ್ ಎನ್ಎಂಕೆ ಕುಮಿಟೆ ಕರಾಟೆಯಲ್ಲಿ ಬೆಳ್ಳಿ, ಮೆಹಫೂಝ್ ರೂಮಿ ಕಟ ಕರಾಟೆಯಲ್ಲಿ ಬೆಳ್ಳಿ, ನೆಹಶಲ್ ಕುಮಿಟೆ ಕರಾಟೆಯಲ್ಲಿ ಕಂಚು, ತಮೀಮ್ ರೂಮಿ ಮತ್ತು ರಿಜುಲ್ ಕಟದಲ್ಲಿ ಕಂಚು ಪಡೆದಿದ್ದಾರೆ.
ಶಕ್ತಿ ಪಿ.ಯು. ಕಾಲೇಜಿನ ಅಜಂಲಿ ಜೋಗಿ ಕುಮಿಟೆಯಲ್ಲಿ ಚಿನ್ನ, ಕಟದಲ್ಲಿ ಕಂಚು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಚಾಂಪಿಯನ್ಗಳನ್ನು ಶಾಲೆಯ ಸಂಸ್ಥಾಪಕ ಕೆ.ಸಿ. ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್, ಕರಾಟೆ ತರಬೇತುದಾರ ಅರ್ಜುನ್ ಶೆಟ್ಟಿ ಅಭಿನಂದಿಸಿದರು.